ಈ ಕಾಲದ ರಾಜಕಾರಣಿ!

ದುಡ್ಡಿನ ಮದ ತಲೆಯೇರಿ,
ಅತಿಯಾಸೆಯ ಭೂತ ಬೆನ್ನೇರಿ,
ಒ೦ದು ರಾಜಕಾರಣಿ ಕೂಗಿದ,
ನಿಖಿಲ್ ಎಲ್ಲಿದ್ಯಪ್ಪಾ?

ರೇಶನ್ ಅಂಗಡಿಯ ಸಾಲಿನಲ್ಲಿ,
ತರಕಾರಿಯ ಮಾರುಕಟ್ಟೆಯಲ್ಲಿ,
ಒಮ್ಮೆಯೂ ಕಾಣದೆ ಜನ ಕೇಳಿದರು,
ನಿಖಿಲ್ ಎಲ್ಲಿದ್ಯಪ್ಪಾ?

ತಾತನ ತೊಡೆ ಹತ್ತಿ,
ಅಪ್ಪನ ಭುಜ ಏರಿ,
ಜನರ ತಲೆಮೇಲೆ ಕಾಲಿಡಲು ಬ೦ದಿರುವ,
ನಿಖಿಲ್ ಎಲ್ಲಿದ್ಯಪ್ಪಾ?

ಅರಹತೆ ಇಲ್ಲದ ಅಸ್ತಿತ್ವ,
ಬುದ್ಧಿ ಇಲ್ಲದ ಜ್ಞಾನಿ,
ತಾನೇ ಎದುರು ಬ೦ದಾಗ,
ಕನ್ನಡಿ ಕೇಳಿತು – “ನಿಖಿಲ್ ಎಲ್ಲಿದ್ಯಪ್ಪಾ?”